ಜರ್ಮನ್ ಮೂಲ : ಪೀಟರ್ ಬಿಕ್ಸೆಲ್
ನಾನು ನಿಮಗೆ, ಇತ್ತೀಚಿಗೆ ಮಾತನಾಡುವದನ್ನೇ ಬಿಟ್ಟ , ದಣಿದ ಮುಖವನ್ನು ಹೊತ್ತ , ಕಿರುನಗೆಯನ್ನೂ ಬೀರಲಾರದಷ್ಟು ಆಯಾಸಗೊಂಡಿರುವ , ಕೋಪಿಸಿಕೊಳ್ಳುವದಕ್ಕೂ ಶಕ್ತಿಯಿರದ ಮುದುಕನೊಬ್ಬನ ಕತೆಯನ್ನು ಹೇಳಬೇಕು. ಅವನು ವಾಸವಾಗಿರುವದು ಒಂದು ಸಣ್ಣ ಪಟ್ಟಣದಲ್ಲಿರುವ ಮೂಲೆ ಬೀದಿಯೊಂದರಲ್ಲಿರುವ ಸಣ್ಣ ಮನೆಯಲ್ಲಿ. ಹಾಗೆ ನೋಡಿದರೆ ಇತರರಿಗಿಂತ ಭಿನ್ನವಾದ ಯಾವುದೇ ವಿಶೇಷತೆಯೂ ಇಲ್ಲದ ಅವನನ್ನು ವಿವರವಾಗಿ ವರ್ಣಿಸುವ ಅವಶ್ಯಕತೆಯಿಲ್ಲ. ಅವನ ಸದಾ ಕಾಲದ ಉಡುಪು ಎಂದರೆ ಕಂದು ಬಣ್ಣದ ಟೊಪ್ಪಿ , ಕಂದು ಬಣ್ಣದ ಪ್ಯಾ೦ಟ್ , ಅದೇ ಬಣ್ಣದ ಒಂದು ಜಾಕೆಟ್ ಮತ್ತು ಚಳಿಗಾಲದಲ್ಲಿ ಕಂದು ಬಣ್ಣದ ಉದ್ದನೆಯ ನಿಲುವಂಗಿ. ಅವನ ಸುಕ್ಕುಗಟ್ಟಿದ , ಶುಷ್ಕ ಚರ್ಮದ ಕುತ್ತಿಗೆಗೆ ಅಗತ್ಯಕ್ಕಿಂತ ತುಸು ಹೆಚ್ಚೇ ದೊಡ್ಡದು ಎಂದು ತೋರುವ ಕಾಲರು .
ಅವನ ವಾಸವಾಗಿದ್ದುದು ಮನೆಯ ಮೇಲಿನ ಮಹಡಿಯಲ್ಲಿ. ಬಹುಶ: ಯಾವುದೋ ಕಾಲದಲ್ಲಿ ಅವನಿಗೂ ಮದುವೆಯಾಗಿ ಹೆಂಡತಿ ಮಕ್ಕಳಿದ್ದಿದ್ದರೇನೋ ಅಥವಾ ಅವನು ಬೇರೆ ಯಾವುದೋ ಊರಿನಲ್ಲಿ ವಾಸವಾಗಿದ್ದಿದ್ದನೇನೋ ? ಖಂಡಿತವಾಗಿಯೂ ಅವನೂ ಸಹ ಯಾವತ್ತೋ ಒಮ್ಮೆ ಮಗುವಾಗಿದ್ದ. ಆದರೆ ಅದು, ಮಕ್ಕಳುಗಳು ಸಹ ದೊಡ್ಡವರಂತೆ ಬಟ್ಟೆ ಧರಿಸುತ್ತಿದ್ದ ಕಳೆದು ಹೋದ ಯಾವುದೋ ಪುರಾತನ ಕಾಲ. ಅವತ್ತಿನ ಕಾಲದ ಮಕ್ಕಳನ್ನು ಗೋಡೆಗೆ ನೇತು ಹಾಕಿರುವ ಅಜ್ಜಿಯ ಕಾಲದ ಫೋಟೋದಲ್ಲಿ ನೀವು ನೋಡಬಹುದು. ಅವನ ಕೋಣೆಯಲ್ಲಿ ಇದ್ದುದು -ಎರಡು ಖುರ್ಚಿ, ಒಂದು ಮೇಜು , ಒಂದು ಕಂಬಳಿ, ಒಂದು ಹಾಸಿಗೆ ಮತ್ತು ಒಂದು ಕಪಾಟು. ಸಣ್ಣ ಮೇಜಿನ ಮೇಲೆ ಒಂದು ಅಲಾರಾಂನ್ನು ಇಡಲಾಗಿತ್ತು . ಅದರ ಪಕ್ಕದಲ್ಲಿ ಒಂದಷ್ಟು ಹಳೆ ವೃತ್ತ ಪತ್ರಿಕೆಗಳು ಹಾಗೂ ಒಂದು ಒಂದು ಫೋಟೋ ಆಲ್ಬಮ್ ಇದ್ದವು. ಗೋಡೆಯ ಮೇಲೆ ಒಂದು ಕನ್ನಡಿ ಮತ್ತು ಒಂದು ಫೋಟೋ ತೂಗಾಡುತ್ತಿದ್ದವು.
ಮುದುಕ ಬೆಳಿಗ್ಗೆ ಮತ್ತು ಮಧ್ಯಾಹ್ನ ಸುತ್ತಾಡಲು ಹೊರಗೆ ಹೋಗುತ್ತಿದ್ದ , ಅಕ್ಕಪಕ್ಕದವರೊಡನೆ ಕುಶಲೋಪರಿಯ ಒಂದೆರಡು ಮಾತುಗಳನ್ನು ಆಡುತ್ತಿದ್ದ. ಸಂಜೆ ಅವನ ಮೇಜಿನ ಮುಂದೆ ಕುಳಿತು ಕಾಲ ಕಳೆಯುತ್ತಿದ್ದ. ಈ ದಿನಚರಿ ಭಾನುವಾರವೇ ಇರಲಿ ಅಥವಾ ಇನ್ಯಾವುದೇ ದಿನ ಇರಲಿ ಯಾವತ್ತೂ ಬದಲಾಗುತ್ತಿರಲಿಲ್ಲ . ಅವನು ಮೇಜಿನ ಮುಂದೆ ಕುಳಿತಾಗಲೆಲ್ಲ ಅವನಿಗೆ ಗಡಿಯಾರದ ಟಿಕ್ ಟಿಕ್ ಶಬ್ದ ಕೇಳಿಸುತ್ತಿತ್ತು ಮತ್ತು ಗಡಿಯಾರ ಎಡಬಿಡದೆ ಲಯ ಬದ್ಧವಾಗಿ ಟಿಕ್ ಟಿಕ್ ಶಬ್ದ ಮಾಡುತ್ತಿತ್ತು.
ಇದ್ದಕ್ಕಿದ್ದ ಹಾಗೆ ವಿಶೇಷ ದಿನವೊಂದು ಬಂದಿತು. ಬಿಸಿಲೂ ಅಲ್ಲದ ಚಳಿಯೂ ಅಲ್ಲದ ಆಹ್ಲಾದಕರ ವಾತಾವರಣ. ಹಕ್ಕಿಗಳ ಕಲರವ , ಕೇಕೆ ಹಾಕುತ್ತ ಆಡುತ್ತಿದ್ದ ಮಕ್ಕಳು , ಸ್ನೇಹಭಾವದ ಸುತ್ತಲಿನ ಜನ ಮತ್ತು ಇವೆಲ್ಲವುಗಳಿಂತ ಹೆಚ್ಚಿನದೇನೆಂದರೆ ಮುದುಕನಿಗೆ ಇದ್ದಕ್ಕಿದ್ದ ಹಾಗೆ ಸುತ್ತಲಿರುವದೆಲ್ಲವೂ ಇಷ್ಟವಾಗಿತ್ತು.
ಅವನು ನಸುನಕ್ಕ.
"ಈ ಕ್ಷಣದಿಂದ ಎಲ್ಲವೂ ಬದಲಾಗುತ್ತದೆ " ಅವನು ಭಾವಿಸಿದ.
ಅವನು ಅಂಗಿಯ ಮೇಲಿನ ಎರಡು ಗುಂಡಿಗಳನ್ನು ತೆಗೆದ. ತಲೆಯ ಮೇಲಿದ್ದ ಟೊಪ್ಪಿಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡು ರಭಸವಾಗಿ ಹೆಜ್ಜೆ ಹಾಕತೊಡಗಿದ. ಅವನು ಅದೆಷ್ಟು ವೇಗವಾಗಿ ನಡೆಯುತ್ತಿದ್ದನೆಂದರೆ ಕೆಲವೊಮ್ಮೆ ಅವನು ನಡೆಯುತ್ತಲೇ ಜಿಗಿಯುತ್ತಿದ್ದ ಮತ್ತು ಅವನಿಗೆ ಅಸಾಧಾರಣವಾದ ಸಂತೋಷ ಒಳಗಿನಿಂದ ಉಕ್ಕಿ ಬರುತ್ತಿತ್ತು. ಅವನ ಮನೆಯಿದ್ದ ಓಣಿಯತ್ತ ಹೆಜ್ಜೆ ಹಾಕಿದ. ಹಾದಿಯಲ್ಲಿ ಆಡುತ್ತಿದ್ದ ಮಕ್ಕಳತ್ತ ಖುಷಿಯಿಂದ ಕೈ ಬೀಸಿದ. ಮನೆಯ ಬಳಿ ಬಂದು ಮೆಟ್ಟಿಲುಗಳನ್ನು ಹತ್ತಿ ಮೇಲಿನ ಮಹಡಿ ತಲುಪಿ , ಕಿಸೆಯಿಂದ ಕೀ ತೆಗೆದು , ಬಾಗಿಲಿಗೆ ಹಾಕಿದ್ದ ಬೀಗವನ್ನು ತೆಗೆದು ತನ್ನ ಕೋಣೆಯ ಬಾಗಿಲನ್ನು ತೆರೆದ.

ಆದರೆ ಅವನ ಕೋಣೆಯಲ್ಲಿ ಎಲ್ಲವೂ ಮೊದಲಿನಂತೆಯೇ ಇತ್ತು . ಒಂದು ಮೇಜು , ಎರಡು ಖುರ್ಚಿ, ಒಂದು ಹಾಸಿಗೆ. ಅವನು ಕುಳಿತುಕೊಂಡಾಗ ಅವನಿಗೆ ಅದೇ ಅಲಾರ್ಮ್ ಟಿಕ್ ಗುಡುತ್ತಿರುವದು ಕೇಳಿಸಿತು. ಇದ್ದಕ್ಕಿದ್ದ ಹಾಗೆ ಅವನ ಖುಷಿಯೆಲ್ಲ ಕಳೆದುಹೋಯಿತು. ಯಾವುದೂ ಬದಲಾಗಿರಲಿಲ್ಲ.
ಮತ್ತು ಇದು ಅರಿವಾದೊಡನೆ ಅವನಿಗೆ ಅಸಾಧ್ಯ ರೋಷವುಕ್ಕಿ ಬಂದಿತು.
ಕನ್ನಡಿಯಲ್ಲಿ ಮುಖವನ್ನು ನೋಡಿ ಕೊಂಡಾಗ ಅವನ ಮುಖ, ಉಕ್ಕಿ ಬರುತ್ತಿರುವ ಕೋಪದಿಂದ ಕೆಂಪಾಗುತ್ತಿರುವದು ಕಾಣಿಸಿತು. ಅವನ ಕಣ್ಣುಗಳು ಕಿರಿದಾಗತೊಡಗಿದವು. ಅವನು ಮುಷ್ಠಿ ಕಟ್ಟಿದ ಕೈಯನ್ನು ಮೇಲಕ್ಕೆತ್ತಿದ ಮತ್ತು ರಭಸವಾಗಿ ಮೇಜಿನ ಮೇಲೆ ಬಾರಿಸಿದ. ಮೊದಲು ಒಂದು ಹೊಡೆತ , ನಂತರ ಇನ್ನೊಂದು. ಲಯಬದ್ಧವಾಗಿ ಮೇಜಿನ ಮೇಲೆ ಬಾರಿಸುತ್ತ ಜೋರಾಗಿ ಕೂಗಾಡತೊಡಗಿದ :
"ಇವೆಲ್ಲವೂ ಬದಲಾಗಲೇಬೇಕು, ಇವೆಲ್ಲವೂ ಬದಲಾಗಲೇಬೇಕು "

ಮತ್ತು ಈಗ ಅವನಿಗೆ ಅಲಾರಂನ ಶಬ್ದ ಕೇಳುತ್ತಿರಲಿಲ್ಲ.
ಆದರೆ ಸ್ವಲ್ಪ ಸಮಯದ ನಂತರ ಮೇಜನ್ನು ಕುಟ್ಟಿ ಕುಟ್ಟಿ ಅವನ ಕೈ ನೋಯರಾಂಭಿಸಿತು , ಅವನ ಧ್ವನಿ ಕ್ಷೀಣವಾಗತೊಡಗಿತು ಮತ್ತು ಅಲಾರಂನ ಶಬ್ದ ಮತ್ತೆ ಕೇಳಲಾರಂಭಿಸಿತು.
ಯಾವುದೂ ಬದಲಾಗಿರಲಿಲ್ಲ.
"ಯಾವತ್ತೂ ಇದೆ ಮೇಜು " ಮುದುಕ ಗೊಣಗಿದ.
ಆದರೆ ಸ್ವಲ್ಪ ಸಮಯದ ನಂತರ ಮೇಜನ್ನು ಕುಟ್ಟಿ ಕುಟ್ಟಿ ಅವನ ಕೈ ನೋಯರಾಂಭಿಸಿತು , ಅವನ ಧ್ವನಿ ಕ್ಷೀಣವಾಗತೊಡಗಿತು ಮತ್ತು ಅಲಾರಂನ ಶಬ್ದ ಮತ್ತೆ ಕೇಳಲಾರಂಭಿಸಿತು.
ಯಾವುದೂ ಬದಲಾಗಿರಲಿಲ್ಲ.
"ಯಾವತ್ತೂ ಇದೆ ಮೇಜು " ಮುದುಕ ಗೊಣಗಿದ.
"ಅದೇ ಕುರ್ಚಿ , ಅದೇ ಹಾಸಿಗೆ , ಅದೇ ಚಿತ್ರಪಟ ಮತ್ತು ನಾನು ಮೇಜನ್ನು ಮೇಜು ಎನ್ನುತ್ತೇನೆ , ಚಿತ್ರಪಟವನ್ನು ಚಿತ್ರಪಟ ಎನ್ನುತ್ತೇನೆ, ಹಾಸಿಗೆಗೆ ಹಾಸಿಗೆ ಹಾಗೂ ಈ ಜನ ಕುರ್ಚಿಗೆ ಕುರ್ಚಿ ಎನ್ನುತ್ತಾರೆ. ಇದೆಲ್ಲ ಯಾವ ಪುರುಷಾರ್ಥಕ್ಕಾಗಿ ? ಫ್ರೆ೦ಚ್ ನಲ್ಲಿ ಹಾಸಿಗೆಗೆ 'ಲಿಟ್' ಎನ್ನುತ್ತಾರೆ , ಮೇಜಿಗೆ 'ಟ್ಯಾಬ್ಲೆ' ಎನ್ನುತ್ತಾರೆ , ಚಿತ್ರಪಟಕ್ಕೆ 'ಟ್ಯಾಬ್ಲ್ಹೋ ', ಕುರ್ಚಿಗೆ 'ಶೇಜ್' ಎನ್ನುತ್ತಾರೆ. ಆದರೂ ಪರಸ್ಪರರಿಗೆ ಅವರು ಮಾತನಾಡುವದು ಏನು ಎಂದು ಅರ್ಥವಾಗುತ್ತದೆ. ಈ ಚೈನೀಸ್ ಜನಗಳೂ ಅಷ್ಟೇ, ಅವರು ಮಾತನಾಡುವದು ಪರಸ್ಪರರಿಗೆ ಅರ್ಥವಾಗುತ್ತದೆ.
" ಹಾಸಿಗೆಗೆ ಚಿತ್ರಪಟ ಎಂದು ಕರೆಯಬಾರದೇಕೆ ?" ಮುದುಕ ಆಲೋಚಿಸಿದ ಮತ್ತು ಈ ಯೋಚನೆ ಹೊಳೆದುದ್ದಕ್ಕೆ ಕಿರುನಕ್ಕ , ನಂತರ ಜೋರಾಗಿ ನಗತೊಡಗಿದ. ಪಕ್ಕದ ಮನೆಯವರು ಅವನಿಗೆ ಗಲಾಟೆ ಮಾಡಬೇಡ ಎಂದು ಹೇಳುವವರೆಗೆ ಅವನು ನಗುತ್ತಲೇ ಇದ್ದ.
"ಇವತ್ತಿನಿಂದ ಇವೆಲ್ಲವೂ ಬದಲಾಗುತ್ತದೆ " ಅವನು ಜೋರಾಗಿ ಹೇಳಿದ ಮತ್ತು ಹಾಸಿಗೆಗೆ ಚಿತ್ರಪಟ ಎಂದು ಕರೆದ.
"ನನಗೆ ಸುಸ್ತಾಗಿದೆ . ನಾನು ಚಿತ್ರಪಟದ ಮೇಲೆ ಮಲಗುತ್ತೇನೆ". ಅವನು ಹೇಳಿಕೊಂಡ .
"ನನಗೆ ಸುಸ್ತಾಗಿದೆ . ನಾನು ಚಿತ್ರಪಟದ ಮೇಲೆ ಮಲಗುತ್ತೇನೆ". ಅವನು ಹೇಳಿಕೊಂಡ .
ಬೆಳಿಗ್ಗೆ ಹೊತ್ತು ಏರುವವರೆಗೆ ಅವನು ಚಿತ್ರಪಟದ ಮೇಲೆ ಮಲಗಿಯೇ ಇದ್ದ ಮತ್ತು ಈ ಕ್ಷಣದಿಂದ ಕುರ್ಚಿಗೆ ಏನೆಂದು ಕರೆಯಬೇಕು ಎಂದು ಆಳವಾಗಿ ಚಿ೦ತಿಸಿದ. ಕೊನೆಗೆ ಕುರ್ಚಿಗೆ ಅಲಾರಾಂ ಎಂದು ನಾಮಕರಣ ಮಾಡಿದ.
ಅವನು ಚಿತ್ರಪಟದಿಂದ ಎದ್ದು , ಉಡುಪನ್ನು ಧರಿಸಿ , ಅಲಾರಾಂ ಮೇಲೆ ಕುಳಿತುಕೊಂಡು , ಎರಡೂ ಕೈಗಳನ್ನು ಮೇಜಿನ ಮೇಲೆ ಚಾಚಿಟ್ಟುಕೊಂಡ. ಆದರೆ ಮೇಜಿಗೆ ಅವನು ಮೇಜು ಎನ್ನುತ್ತಿರಲಿಲ್ಲ ಬದಲಾಗಿ ಕಂಬಳಿ ಎನ್ನುತ್ತಿದ್ದ.
ಹಾಗಾಗಿ ಪ್ರತಿ ದಿನ ಬೆಳಿಗ್ಗೆ ಅವನು ಚಿತ್ರ ಪಟದಿಂದ ಎದ್ದು , ಬಟ್ಟೆ ಧರಿಸಿ , ಕಂಬಳಿಯ ಮುಂದಿರುವ ಅಲಾರಾಂ ಮೇಲೆ ಕುಳಿತುಕೊಂಡು ಇವತ್ತು ಯಾವ ವಸ್ತುವಿಗೆ ಏನೆಂದು ನಾಮಕರಣ ಮಾಡುವದು ಎನ್ನುವದನ್ನು ಗಂಭೀರವಾಗಿ ಚಿ೦ತಿಸತೊಡಗಿದ .
ಹಾಸಿಗೆ ಚಿತ್ರಪಟವಾಯಿತು.
ಮೇಜು ಕಂಬಳಿಯಾಯಿತು.
ಕುರ್ಚಿ ಅಲಾರಾಂ ಆಯಿತು
ದಿನಪತ್ರಿಕೆ ಹಾಸಿಗೆಯಾಯಿತು.
ಕನ್ನಡಿ ಕುರ್ಚಿಯಾಯಿತು.
ಗಡಿಯಾರ ಆಲ್ಬಮ್ ಆಯಿತು
ಕಪಾಟು ದಿನಪತ್ರಿಕೆಯಾಯಿತು.
ಕಂಬಳಿ ಕಪಟಾಯಿತು.
ಚಿತ್ರಪಟ ಮೇಜಾಯಿತು.
ಮತ್ತು ಆಲ್ಬಮ್ ಗೆ ಕನ್ನಡಿ ಎಂದು ನಾಮಕರಣ ಮಾಡಲಾಯಿತು.
ಈ ಪ್ರಕಾರವಾಗಿ ,

ಪ್ರತಿ ದಿನ ಬೆಳಿಗ್ಗೆ ಮುದುಕ ಚಿತ್ರಪಟದ ಮೇಲೆ ಬಹಳಷ್ಟು ಹೊತ್ತು ಮಲಗಿರುತ್ತಿದ್ದ ಮತ್ತು ಒಂಬತ್ತು ಗಂಟೆಗೆ ಆಲ್ಬಮ್ ಕೂಗುತ್ತಿತ್ತು , ಆಗ ಮುದುಕ ಮೇಲೆದ್ದು ಚಳಿಯಾಗಬಾರದು ಎಂದು ನೆಲಕ್ಕೆ ಹಾಸಿದ್ದ ಕಪಾಟಿನ ಮೇಲೆ ನಿಂತುಕೊಳ್ಳುತ್ತಿದ್ದ , ನಂತರ ದಿನಪತ್ರಿಕೆಯ ಬಾಗಿಲು ತೆರೆದು ತನ್ನ ಬಟ್ಟೆಗಳನ್ನು ತೆಗೆದುಕೊಳ್ಳುತ್ತಿದ್ದ, ಉಡುಪನ್ನು ಧರಿಸಿ , ಗೋಡೆಗೆ ನೇತು ಹಾಕಿದ್ದ ಕುರ್ಚಿಯಲ್ಲಿ ಮುಖವನ್ನು ನೋಡಿಕೊಳ್ಳುತ್ತಿದ್ದ ಮತ್ತು ಅವನ ಅಮ್ಮನ ಮೇಜು ಬರುವವರೆಗೆ ಕನ್ನಡಿಯ ಪುಟಗಳನ್ನು ನಿಧಾನವಾಗಿ ತೆರೆಯುತ್ತಿದ್ದ.
ಮುದುಕನಿಗೆ ಇದು ಬಹಳ ತಮಾಷೆಯಾಗಿ ತೋರಿತು ಮತ್ತು ಅವನು ದಿನ ಪೂರ್ತಿ ಹೊಸ ಹೊಸ ಶಬ್ದಗಳನ್ನು ಮನನ ಮಾಡುವ ಕೆಲಸದಲ್ಲಿ ತನ್ನನ್ನು ತಾನು ಪೂರ್ತಿಯಾಗಿ ತೊಡಗಿಸಿಕೊಂಡ. ಈಗ ಪ್ರತಿಯೊಂದಕ್ಕೂ ಮರು ನಾಮಕರಣವಾಗಿತ್ತು : ಅವನು ಈಗ ಮನುಷ್ಯನಾಗಿರಲಿಲ್ಲ ಬದಲಾಗಿ ಪಾದವಾಗಿದ್ದ, ಆದರೆ ಪಾದಕ್ಕೆ ಬೆಳಗು ಎನ್ನುತ್ತಿದ್ದ ಮತ್ತು ಬೆಳಗಿಗೆ ಮನುಷ್ಯ ಎನ್ನುತ್ತಿದ್ದ.
ಈ ಹಂತದಿಂದ ಮುಂದಿನ ಕತೆಯನ್ನು ನೀವೇ ಊಹಿಸಬಹುದು. ಮುದುಕ ಹೇಗೆ ಶಬ್ದಗಳನ್ನು ಬದಲಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದನೋ ಅದೇ ಸೂತ್ರವನ್ನು ನೀವು ಪಾಲಿಸಬಹುದು :
ಗಡಿಯಾರ ಗಂಟೆ ಬಾರಿಸುವದನ್ನು ಹೆಜ್ಜೆ ಹಾಕುವದು ಎನ್ನುವದು
ಹಿಮಗಟ್ಟುವದನ್ನು ನೋಡುವದು ಎನ್ನುವದು
ಮಲಗುವದನ್ನು ಗಂಟೆ ಬಾರಿಸುವದು ಎನ್ನುವದು
ನಿಲ್ಲುವದನ್ನು ಹಿಮಗಟ್ಟುವದು ಎನ್ನುವದು
ಮಲಗುವದನ್ನು ಗಂಟೆ ಬಾರಿಸುವದು ಎನ್ನುವದು
ನಿಲ್ಲುವದನ್ನು ಹಿಮಗಟ್ಟುವದು ಎನ್ನುವದು
ಹೆಜ್ಜೆ ಹಾಕುವದಕ್ಕೆ ಪುಟ ಮಗಚುವದು ಎನ್ನುವದು
ಅದರಂತೆ :
ಮನುಷ್ಯವಾದರೂ ಮುದುಕ ಪಾದ ಬಹಳಷ್ಟು ಹೊತ್ತು ಚಿತ್ರಪಟದಲ್ಲಿ ಗಂಟೆ ಬಾರಿಸುತ್ತಿದ್ದ ಮತ್ತು ಒಂಬತ್ತು ಗಂಟೆಗೆ ಫೋಟೋ ಆಲ್ಬಮ್ ಹೆಜ್ಜೆಹಾಕುತ್ತಿತ್ತು. ಆಗ ಪಾದ ಚಳಿಯಾಗಬಾರದು ಎಂದು ನೆಲಕ್ಕೆ ಹಾಸಿದ್ದ ಕಪಾಟಿನ ಮೇಲೆ ಹಿಮ ಗಟ್ಟುತ್ತಿದ್ದ. ನಂತರ ಕಪಾಟಿನ ಪುಟ ತಿರುವಿ ಹಾಕುತ್ತಿದ್ದ . . . . .
ಯಾರಾದರೂ ಹೀಗೆ ಹೇಳುವದನ್ನು ಕೇಳಿದರೆ ಅವನಿಗೆ ನಗು ಬರುತ್ತಿತ್ತು :
ನಾಳೆ ಫುಟ್ ಬಾಲ್ ಪಂದ್ಯ ನೋಡಲು ನೀವೂ ಹೋಗುತ್ತೀರಾ ? ಅಥವಾ "ಎರಡು ತಿಂಗಳಿನಿಂದ ಮಳೆ ಸುರಿಯುತ್ತಿದೆ " ಅಥವಾ " ನನಗೆ ಅಮೆರಿಕಾದಲ್ಲಿ ಒಬ್ಬ ಚಿಕ್ಕಪ್ಪನಿದ್ದಾನೆ "
ನಗುವದೊಂದೇ ಅವನಿಗಿದ್ದ ಮಾರ್ಗವಾಗಿತ್ತು ಯಾಕೆಂದರೆ ಇವೆಲ್ಲ ಮಾತುಗಳು ಅವನಿಗೆ ಅರ್ಥವಾಗುತ್ತಿರಲಿಲ್ಲ.
ಆದರೆ ಒಂದು ವಿಷಯ, ಇದು ತಮಾಷೆಯ ಕತೆಯಲ್ಲ.
ವಿಷಾದದ ಭಾವದೊಂದಿಗೆ ಶುರುವಾದ ಕಥೆ ಅದೇ ಭಾವದಲ್ಲೇ ಅಂತ್ಯವಾಗುತ್ತದೆ.
ಮುದುಕ ಹೊರಗೆ ಹೋಗಿ ಒಂದಷ್ಟು ಪುಸ್ತಕಗಳನ್ನು ಕೊಂಡು ತಂದು ಅದರಲ್ಲಿ ಈ ಹೊಸ ಶಬ್ದಗಳನ್ನು ಬರೆದಿಡತೊಡಗಿದ. ಈ ಅಗಾಧ ಕೆಲಸದಲ್ಲಿ ಅವಿರತವಾಗಿ ಅವನು ಮುಳುಗಿರುತ್ತಿದ್ದರಿಂದ ಅವನು ಮನೆಯಿಂದ ಹೊರಗೆ ಬರುವದೇ ವಿರಳವಾಗತೊಡಗಿತು.
ಅವನು ಹೊಸ ಹೊಸ ಶಬ್ದಗಳನ್ನು ಕಲಿಯುತ್ತಿದ್ದ ಹಾಗೆ ರೂಢಿಯಲ್ಲಿದ್ದ ಹಳೆಯ ಶಬ್ದಗಳನ್ನು ಮರೆಯತೊಡಗಿದ. ಈಗ ಅವನಿಗಷ್ಟೇ ಕರಗತವಾಗಿರುವ ಹೊಸ ಭಾಷೆ ಅವನಿಗೆ ಮಾತ್ರ ತಿಳಿದಿತ್ತು.
ಆಗಾಗ ಅವನಿಗೆ ಹೊಸ ಭಾಷೆಯಲ್ಲಿ ಕನಸುಗಳು ಬೀಳುತ್ತಿದ್ದವು. ಅವನು ತನ್ನ ಬಾಲ್ಯ ಕಾಲದ ಎಲ್ಲ ಹಾಡುಗಳನ್ನು ಹೊಸ ಭಾಷೆಗೆ ಅನುವಾದ ಮಾಡಿಕೊಂಡಿದ್ದ ಮತ್ತು ಅವುಗಳನ್ನು ತನ್ನಷ್ಟಕ್ಕೆ ತಾನೇ ಸಣ್ಣಗೆ ಗುನುಗಿಕೊಳ್ಳುತ್ತಿದ್ದ.
ಆದರೆ ಕ್ರಮೇಣ ಅವನಿಗೆ ಅನುವಾದದ ಕೆಲಸ ಸಹ ಕ್ಲಿಷ್ಟವೆನಿಸತೊಡಗಿತು. ಇತ್ತೀಚಿಗೆ ಅವನಿಗೆ ತನ್ನ ಹಳೆಯ ಭಾಷೆ ಮರೆತು ಹೋಗುತ್ತಿದ್ದರಿಂದ ಅವನ ಪುಸ್ತಕಗಳಲ್ಲಿ ಸರಿಯಾದ ಶಬ್ದಕ್ಕಾಗಿ ಹುಡುಕಾಡಬೇಕಾಗುತ್ತಿತ್ತು. ಜನ ವಸ್ತುಗಳಿಗೆ ಏನೆನ್ನುತ್ತಾರೆ ಎನ್ನುವದನ್ನು ಜ್ಞಾಪಿಸಿಕೊಳ್ಳಲು ಅವನು ಸುದೀರ್ಘವಾಗಿ ಆಲೋಚಿಸಬೇಕಿತ್ತು.

ಅವನು ಚಿತ್ರಪಟ ಎನ್ನುವದಕ್ಕೆ ಜನ ಹಾಸಿಗೆ ಎನ್ನುತ್ತಿದ್ದರು
ಅವನು ಕಂಬಳಿ ಎನ್ನುವದಕ್ಕೆ ಜನ ಮೇಜು ಎನ್ನುತ್ತಿದ್ದರು
ಅವನು ಅಲಾರಾಂ ಎನ್ನುವದಕ್ಕೆ ಜನ ಕುರ್ಚಿ ಎನ್ನುತ್ತಿದ್ದರು
ಅವನು ಹಾಸಿಗೆ ಎನ್ನುವದಕ್ಕೆ ಜನ ದಿನಪತ್ರಿಕೆ ಎನ್ನುತ್ತಿದ್ದರು
ಅವನು ಕುರ್ಚಿ ಎನ್ನುವದಕ್ಕೆ ಜನ ಕನ್ನಡಿ ಎನ್ನುತ್ತಿದ್ದರು
ಅವನು ಮೇಜು ಎನ್ನುವದಕ್ಕೆ ಜನ ಚಿತ್ರಪಟ ಎನ್ನುತ್ತಿದ್ದರು
ಅವನು ಕನ್ನಡಿ ಎನ್ನುವದಕ್ಕೆ ಜನ ಫೋಟೋ ಆಲ್ಬಮ್ ಎನ್ನುತ್ತಿದ್ದರು

ಕೊನೆ ಕೊನೆಗೆ ಜನ ಮಾತನಾಡುವದನ್ನು ಕೇಳಿದರೇ ಅವನಿಗೆ ನಗು ಉಕ್ಕಿ ಬರುತ್ತಿತ್ತು.
ಯಾರಾದರೂ ಹೀಗೆ ಹೇಳುವದನ್ನು ಕೇಳಿದರೆ ಅವನಿಗೆ ನಗು ಬರುತ್ತಿತ್ತು :
ನಾಳೆ ಫುಟ್ ಬಾಲ್ ಪಂದ್ಯ ನೋಡಲು ನೀವೂ ಹೋಗುತ್ತೀರಾ ? ಅಥವಾ "ಎರಡು ತಿಂಗಳಿನಿಂದ ಮಳೆ ಸುರಿಯುತ್ತಿದೆ " ಅಥವಾ " ನನಗೆ ಅಮೆರಿಕಾದಲ್ಲಿ ಒಬ್ಬ ಚಿಕ್ಕಪ್ಪನಿದ್ದಾನೆ "
ನಗುವದೊಂದೇ ಅವನಿಗಿದ್ದ ಮಾರ್ಗವಾಗಿತ್ತು ಯಾಕೆಂದರೆ ಇವೆಲ್ಲ ಮಾತುಗಳು ಅವನಿಗೆ ಅರ್ಥವಾಗುತ್ತಿರಲಿಲ್ಲ.
ಆದರೆ ಒಂದು ವಿಷಯ, ಇದು ತಮಾಷೆಯ ಕತೆಯಲ್ಲ.
ವಿಷಾದದ ಭಾವದೊಂದಿಗೆ ಶುರುವಾದ ಕಥೆ ಅದೇ ಭಾವದಲ್ಲೇ ಅಂತ್ಯವಾಗುತ್ತದೆ.
ಕಂದು ಬಣ್ಣದ ಕೋಟಿನ ಮುದುಕನಿಗೆ ಜನ ಅರ್ಥವಾಗುತ್ತಿರಲಿಲ್ಲ. ಆದರೆ ಅದು ಅಂಥಹ ಗಂಭೀರ ಸಮಸ್ಯೆಯಾಗಿರಲಿಲ್ಲ.
ನಿಜವಾದ ಸಮಸ್ಯೆ ಎಂದಷ್ಟೇ ಜನಕ್ಕೆ ಮುದುಕ ಅರ್ಥವಾಗುತ್ತಿರಲಿಲ್ಲ.
ಹಾಗಾಗಿ ಅವನು ಏನನ್ನೂ ಹೇಳುತ್ತಿರಲಿಲ್ಲ.
ಅವನು ಮೌನಿಯಾದ.
ತನ್ನಷ್ಟಕ್ಕೆ ತಾನು ಮಾತ್ರ ಮಾತನಾಡಿಕೊಳ್ಳುತ್ತಿದ್ದ.
ಮತ್ತು ಎದುರು ಸಿಕ್ಕಿದವರಿಗೆ ವಂದಿಸುವದೂ ಇಲ್ಲ.
ನಿಜವಾದ ಸಮಸ್ಯೆ ಎಂದಷ್ಟೇ ಜನಕ್ಕೆ ಮುದುಕ ಅರ್ಥವಾಗುತ್ತಿರಲಿಲ್ಲ.
ಹಾಗಾಗಿ ಅವನು ಏನನ್ನೂ ಹೇಳುತ್ತಿರಲಿಲ್ಲ.
ಅವನು ಮೌನಿಯಾದ.
ತನ್ನಷ್ಟಕ್ಕೆ ತಾನು ಮಾತ್ರ ಮಾತನಾಡಿಕೊಳ್ಳುತ್ತಿದ್ದ.
ಮತ್ತು ಎದುರು ಸಿಕ್ಕಿದವರಿಗೆ ವಂದಿಸುವದೂ ಇಲ್ಲ.
No comments:
Post a Comment