ಕಟ ಲಟ ಪಟ ಚಟ
ಸದ್ದುಗದ್ದಲದ ಆಸ್ಪತ್ರೆಯ ಸ್ಟ್ರೆಚರ್ನ ಮೇಲೆ ,
ಕ೦ಡೂ ಕಾಣದ ಬಿಳಿಯ ಹೊದಿಕೆಯ ಒಳಗೆ
ಶಬ್ಧವಿಲ್ಲದೇ ಮಲಗಿದ್ದಾಳೆ
ವಿಠೋಬಾನ ಮಗಳು.
ಅಲ್ಲಿ ,
ಗಿರಾಕಿಗಳಿಲ್ಲದ , ವಿಠೋಬಾನ ಭಜ್ಜಿ ಥಣ್ಣಗಾಗುತ್ತಿವೆ .
ಇಲ್ಲಿ,
ಉಸಿರಿಲ್ಲದೇ ವಿಠೋಬಾನ ಮಗಳು ಥಣ್ಣಗಾಗಿದ್ದಾಳೆ.
******
ಶ್! ನನಗೂ ಗೊತ್ತು
ವಿಠೋಬಾನ ಭಜ್ಜಿ ಸ್ವಲ್ಪ ಉಪ್ಪಾಗಿದೆ ,
ಸುಮ್ಮನಿರಿ ದಮ್ಮಯ್ಯ .
ಆಸ್ಪತ್ರೆಯ ಬಿಲ್ಲಿನಲ್ಲೆ ಭಜ್ಜಿ ಕಟ್ಟಿ ಕೊಟ್ಟಿದ್ದಾನೆ.
ಒಂದೆರಡು ಹನಿ ಕಣ್ಣೀರು
ಕಟ್ಟಿದ ಬಿಲ್ಲಿನ ಮೇಲೆ ಬಿದ್ದಿರಲಿಕ್ಕೂ ಸಾಕು..!
*********
ಸಿಡಿಮಿಡಿಗೊಳ್ಳುತ್ತಿದ್ದಾರೆ ಆಸ್ಪತ್ರೆಯ ಸಿಸ್ಟರ್ ಗಳು ,
ಭಜ್ಜಿ ಅಂಗಡಿಯ ವಿಠೋಬಾನ ಬಳಿ
ಭಕ್ಷಿಸು ಸಿಗಲಾರದು.
ಯಾಕಾದಾರೂ ಬರುತ್ತಾವೋ ಇಂತವು !!
*******
ವಿಠೋಬಾನ ಮಗಳಿಗೆ
ಹೃದಯದಲ್ಲಿ ತೂತಾಗಿತ್ತ೦ತೆ .
ಥೋ! ಮಾರಾಯ ನೋಡಬೇಕಿತ್ತು
ತೂತು ಕೆನ್ನೆ ಮೇಲಿನ ಮಚ್ಚೆಯಷ್ಟು ಸಣ್ಣದೆ?
ಸತ್ತು ಹೋದರೆ ಬೇರೊಬ್ಬಳ ಹುಡುಕಬೇಕು .
ಮಾತುಗಳು ಸಾಯುವದೆ ಇಲ್ಲ
ದೇಹ ಸಾಯುತ್ತವೆ.!
****
ಒಳಗೆ ,
ಪೂರ್ತಿಯಾಗಿ ಸತ್ತಿದ್ದಾಳೆ
ವಿಠೋಬಾನ ಮಗಳು , ಐದು ಅಡಿ ಉದ್ದಕ್ಕೆ
ಹೊರಗೆ ,
ಆರು ಅಡಿ ಉದ್ದಕ್ಕೆ ಇಂಚಿಂಚಾಗಿ ಸಾಯುತ್ತಿದ್ದಾನೆ
ವಿಠೋಬ .
ಚಿಂತೆಯಿಲ್ಲ ಬಿಡಿ ,
ಚಿತೆಗೆ ಸಾಕಾಗುವಷ್ಟು ಬಿಲ್ಲುಗಳು ಇನ್ನೂ ಬಾಕಿ ಇವೆ
ಬರ್ರನೇ ಉರಿಯುತ್ತವೆ
ಒಳಗೂ , ಹೊರಗು..!
ಸದ್ದುಗದ್ದಲದ ಆಸ್ಪತ್ರೆಯ ಸ್ಟ್ರೆಚರ್ನ ಮೇಲೆ ,
ಕ೦ಡೂ ಕಾಣದ ಬಿಳಿಯ ಹೊದಿಕೆಯ ಒಳಗೆ
ಶಬ್ಧವಿಲ್ಲದೇ ಮಲಗಿದ್ದಾಳೆ
ವಿಠೋಬಾನ ಮಗಳು.
ಅಲ್ಲಿ ,
ಗಿರಾಕಿಗಳಿಲ್ಲದ , ವಿಠೋಬಾನ ಭಜ್ಜಿ ಥಣ್ಣಗಾಗುತ್ತಿವೆ .
ಇಲ್ಲಿ,
ಉಸಿರಿಲ್ಲದೇ ವಿಠೋಬಾನ ಮಗಳು ಥಣ್ಣಗಾಗಿದ್ದಾಳೆ.
******
ಶ್! ನನಗೂ ಗೊತ್ತು
ವಿಠೋಬಾನ ಭಜ್ಜಿ ಸ್ವಲ್ಪ ಉಪ್ಪಾಗಿದೆ ,
ಸುಮ್ಮನಿರಿ ದಮ್ಮಯ್ಯ .
ಆಸ್ಪತ್ರೆಯ ಬಿಲ್ಲಿನಲ್ಲೆ ಭಜ್ಜಿ ಕಟ್ಟಿ ಕೊಟ್ಟಿದ್ದಾನೆ.
ಒಂದೆರಡು ಹನಿ ಕಣ್ಣೀರು
ಕಟ್ಟಿದ ಬಿಲ್ಲಿನ ಮೇಲೆ ಬಿದ್ದಿರಲಿಕ್ಕೂ ಸಾಕು..!
*********
ಸಿಡಿಮಿಡಿಗೊಳ್ಳುತ್ತಿದ್ದಾರೆ ಆಸ್ಪತ್ರೆಯ ಸಿಸ್ಟರ್ ಗಳು ,
ಭಜ್ಜಿ ಅಂಗಡಿಯ ವಿಠೋಬಾನ ಬಳಿ
ಭಕ್ಷಿಸು ಸಿಗಲಾರದು.
ಯಾಕಾದಾರೂ ಬರುತ್ತಾವೋ ಇಂತವು !!
*******
ವಿಠೋಬಾನ ಮಗಳಿಗೆ
ಹೃದಯದಲ್ಲಿ ತೂತಾಗಿತ್ತ೦ತೆ .
ಥೋ! ಮಾರಾಯ ನೋಡಬೇಕಿತ್ತು
ತೂತು ಕೆನ್ನೆ ಮೇಲಿನ ಮಚ್ಚೆಯಷ್ಟು ಸಣ್ಣದೆ?
ಸತ್ತು ಹೋದರೆ ಬೇರೊಬ್ಬಳ ಹುಡುಕಬೇಕು .
ಮಾತುಗಳು ಸಾಯುವದೆ ಇಲ್ಲ
ದೇಹ ಸಾಯುತ್ತವೆ.!
****
ಒಳಗೆ ,
ಪೂರ್ತಿಯಾಗಿ ಸತ್ತಿದ್ದಾಳೆ
ವಿಠೋಬಾನ ಮಗಳು , ಐದು ಅಡಿ ಉದ್ದಕ್ಕೆ
ಹೊರಗೆ ,
ಆರು ಅಡಿ ಉದ್ದಕ್ಕೆ ಇಂಚಿಂಚಾಗಿ ಸಾಯುತ್ತಿದ್ದಾನೆ
ವಿಠೋಬ .
ಚಿಂತೆಯಿಲ್ಲ ಬಿಡಿ ,
ಚಿತೆಗೆ ಸಾಕಾಗುವಷ್ಟು ಬಿಲ್ಲುಗಳು ಇನ್ನೂ ಬಾಕಿ ಇವೆ
ಬರ್ರನೇ ಉರಿಯುತ್ತವೆ
ಒಳಗೂ , ಹೊರಗು..!
ಅದ್ಭುತ !!
ReplyDeleteಧನ್ಯವಾದಗಳು ಗುರುಗಳೇ
ReplyDeletei like it...
ReplyDeletehmmm... nice...
ReplyDeleteಸೂಪರ್ ಆಗಿದ್ದು ಸಚೇತನ.. ಇನ್ನೊಂದು ಸಲ ಓದಿ ಪುನಃ ಪ್ರತಿಕ್ರಿಯೆ ಕೊಡ್ತೆ :)
ReplyDelete@maadhu ,@Kavya ಥಾ೦ ಕ್ಸ್..!!
ReplyDelete@ishwara bhat ಖಂಡಿತ , ಕಾಯುತ್ತಾ ಇರ್ತಿ
ReplyDeleteಸಚೇತನ
ReplyDeleteಆರಂಭ ಮತ್ತು ಕೊನೆ ಅದ್ಭುತವಾಗಿದೆ
ಆದರೆ ಇದು
"ಸತ್ತು ಹೋದರೆ ಬೇರೊಬ್ಬಳ ಹುಡುಕಬೇಕು .
ಮಾತುಗಳು ಸಾಯುವದೆ ಇಲ್ಲ
ದೇಹ ಸಾಯುತ್ತವೆ.! "
ಮತ್ತು ಅಡಿ ಬರಹ "ಬೆತ್ತಲು "
ಕವಿತೆಯ ಹಾದಿ ತಪ್ಪಿಸುತ್ತಿದೆ ಅನ್ನಿಸಿತು
correct nangoo haage anisitu!
ReplyDelete