Sunday, September 11, 2011

ಆಭಾಸ

ಜಿಟೀ ಜಿಟಿ ರಿಪಿ ರಿಪಿ ಪಿರಿ ಪಿರಿ
ಗಾಂಧೀ ಬಜಾರಿನಲ್ಲಿ ಮುಸ್ಸಂಜೆಯಲ್ಲೊಂದು ಮಳೆ ,
ಹೆಚ್.ಎನ್. ಫ್ಲೈ ಓವರ್ ದಾಟಿ ಬಂದ ಕನಸುಗಳು
ರೋಟೀ ಘರ್ ನಲ್ಲಿ ಬೈ ಟೂ ಟೀ ಕುಡಿಯುತ್ತವೆ..!
ಸೊಪ್ಪು ಮಾರುವ ಮುದುಕಿಯ 
ಪುಟ್ಟ ಮೊಮ್ಮಗು , ತೂತು ಕನಸಿನ ಕೊಡೆಯಲ್ಲಿ
ಮಳೆಯ ನೋಡುತಿದೆ..!
ಒಬ್ಬಂಟಿಯಾದರೆ ಫುಟ್‍ಪಾತ್ ಕಡೆ 
ಹೋಗಲೇ ಬೇಡಿ ,
ಮಳೆಯ ನೋಡುತ್ತಾ
ಜೋಡಿಗಳು ಕುಳಿತಿವೆ, ಆದರೂ ಆಯಿತು
ನಿಮಗೂ ಅಸೂಯೆ.!
ನೆನೆದಿದ್ದು , ಗೊಂಬೆ ಮಾರುವ ಹುಡುಗನ 
ಗೊಂಬೆಗಳಷ್ಟೇ ಅಲ್ಲ , 
ಕೆನ್ನೆ ಮೇಲೆ ಇಳಿದ ಕನಸು , ಜೇಬಿನಲ್ಲಿದ್ದ 
ಪುಡಿ ಕಾಸನ್ನು ಒದ್ದೆ ಮಾಡಿದೆ..
ಯಾರೋ ಹೇಳಿದ್ದು ನೆನಪಾಗುತ್ತಿದೆ ,
ಮತ್ತೆ ಮಳೆ ಬರಲಿ , ನೆನಪಾಗಿದ್ದು ಮಾತಾಡೀತು..

3 comments:

  1. ನಿಮಗೂ ಅಸೂಯೆ ಆಯ್ತಾ ಭಟ್ರೇ... ಅಥವಾ ಒಬ್ಬಂಟಿಯಲ್ಲ ನಾನು ಎಂಬ ಹೆಮ್ಮೆ ಆಯ್ತಾ.. ?! ;) :P

    ReplyDelete
  2. adakke heliddu "ಮತ್ತೆ ಮಳೆ ಬರಲಿ , ನೆನಪಾಗಿದ್ದು ಮಾತಾಡೀತು.." ;)

    ReplyDelete
  3. ಇದು ಆಭಾಸ ಅಲ್ಲ, ಅನಿವಾರ್ಯ ಸಚೇತನ :) ಕವನ ಚೆನ್ನಾಗಿದೆ. ಮಳೆ ಬರಲಿ

    ReplyDelete