Wednesday, August 31, 2011

ಅರ್ಥವಿಲ್ಲದ ೩ ತುಂಡುಗಳು

ಏಳು ಹದಿನೈದರ ಕ್ಯಾಬ್ ಇವತ್ತೂ ಲೇಟ್
ಡ್ರೈವರ್ ನ ಕಣ್ಣ ಕೆಳಗೆ ಸತ್ತ ಕನಸಿನ
ಕಪ್ಪು ಕಾಮನಬಿಲ್ಲು ,
ಜ್ಯಾಮ್ ಆದ ಟ್ರಾಫಿಕ್ ತೆವಳುತ್ತ ಬದುಕುತ್ತದೆ
ಇ೦ಡಿಕಾದ ಒಳಗೆ ಕುಳಿತವರ
ಟು ಡು ಲಿಸ್ಟ್ ಬೆಳೆಯುತ್ತಿದೆ..!

ರೆಡ್ ಸಿಗ್ನಲ್ ಅಡಿಯಲ್ಲಿ
 ಮುನ್ನುಗ್ಗಲು ನಿಂತ ಚಕ್ರಗಳು
 ಕ್ಯಾಬ್ ನ ಒಳಗಿಂದ ಪೋಲಿ ನೋಟ
ಓ ದೇವರೆ
ಪಕ್ಕದ ಸ್ಕೂಟೀ ಹುಡುಗಿಗೆ ಹೆಲ್ಮೆಟ್ ತೆಗೆಯಲಿ..!
 
ಇಕ್ಕಟ್ಟಾದ ಇ೦ಡಿಕಾದ ಒಳಗೆ ,
 ಟ್ರಾಫಿಕ್ ನ  ಕುಣಿಕೆಗೆ ಸಮಯ
ಶವವಾಗುತ್ತದೆ , ಮನಸು ಭುಸುಗುಡುತ್ತದೆ
ಅರ್ಥವಿಲ್ಲದ ಕವಿತೆಗಳು ಹುಟ್ಟುತ್ತವೆ,

5 comments:

  1. ಹರೆಯದ ತುಡಿತದ ಕವನ. ವ್ಹಾ ವೆರಿ ನೈಸ್!

    ReplyDelete
  2. ಇದ್ದದ್ದನ್ನು ಇದ್ದ ಹಾಗೇ ನೋಡದಿರುವುದು ಹಿಡಿಸುತ್ತದೆ..

    ReplyDelete
  3. ಆದರೆ ಅದೇ ಇಂಡಿಕಾದ ಒಳಗೇ ಕುಳಿತ ಎರಡು ಕಂಗಳು ಮಾತ್ರ ಇದೆಲ್ಲವನ್ನು ಗಮನಿಸುತ್ತ ತನ್ನದೇ ಯೋಚನಾಲಹರಿಗೆ ಲೇಖನಿ ಕೊಟ್ಟು ಕವನ ಬರೆಯಲು ಹವಣಿಸುತ್ತಿದೆ... :)

    ReplyDelete
  4. @Jagadeesh !!!!
    @Ishwara , kashta , tumba kashta idduddanna idda haage noduvadu
    @Kavya , havanikeyo ,dussahasavo gottilla

    ReplyDelete
  5. kavana, indica kaarannu chennagi balasi kondide!!!!mundina kavana ada mundoyyali endu aashisuva ! pg

    ReplyDelete