Sunday, May 15, 2011

ಈ ಕವಿತೆಗಳು -೩

ಈ ಕವಿತೆಗಳು
ನೆನಪುಗಳ ಖೂನಿಗೆ
ಸುಪಾರೀ ತೆಗೆದುಕೊಂಡ ಅಕ್ಷರಗಳು ..!

ಸಂಬಂದಗಳ ಗೋರಿಯ ಮೇಲೆ
ಕವಿತೆಗಳ ಮಾಲೆ.!

ಬರೆಯಬೇಕೆ೦ದ ಕವಿತೆಯೊಂದು
ಮರೆತು ಹೋಗಿದೆ
ಈಗ ಮನತುಂಬಾ
ಸೂತಕದ ವಾಸನೆ.!

ಶ್..! ಸುಮ್ಮನೇ ಇರಿ,
ಕವಿತೆಗಳ ತಿರುವಿನಲ್ಲಿ
ನೆನಪೊಂದು ಬಿಕ್ಕುತ್ತಿದೆ.!

ಹುತ್ತಗಟ್ಟಿದ ಕವಿತೆಗಳ ಒಳಗೆ
ನೆನಪುಗಳ ಪುಳ-ಪುಳ..!

ಯ್ಯೊ ! ದೇವರೇ  ಈ ಕವಿತೆಯ ತುಂಬಾ
ಇದೆಂತ ಸುಟ್ಟ ವಾಸನೆ?
ಉರಿಯುತ್ತಿರಬೇಕು ಕಾದ ನೆನಪುಗಳು..!

ನೆನಪೊತ್ತರ ಶಸ್ತ್ರಕ್ರಿಯೆ;ಕವಿತೆಗಳ
ಪ್ರತಿ ಪ್ಯಾರಾ
ಕತ್ತರಿಸಿದ ಸಂಬಂದ!

ತಥ್.! ಜಾಸ್ತಿ ಆಗಿವೆ ಕವಿತೆಗಳು
ನೆನಪುಗಳಿಗೆ ಫ್ಯಾಮಿಲೀ ಪ್ಲಾನಿಂಗ್
ಮಾಡಿಸಬೇಕು.

6 comments:

  1. ಆತ್ಮೀಯ
    ಸಚೇತನಾ ನಿಮ್ಮ್ ಕವಿತೆಗಳು ಅದ್ಭುತ ರೀ ನನ್ ಸ್ಟೈಲಲ್ಲಿ ’ಬೆ೦ಕಿ’ ಕಣ್ರಿ ಹ್ಮ್
    ನಿಮ್ಮವ
    ಹರಿ

    ReplyDelete
  2. ಧನ್ಯವಾದಗಳು ಹರಿ..!! :)

    ReplyDelete
  3. ಈ ಕವಿತೆಗಳು - ೧,೨,೩ superb !

    ReplyDelete
  4. ತುಂಬಾ ಚೆನ್ನಾಗಿದೆ ..:)

    ReplyDelete
  5. ನೆನಪುಗಳಿಗೆ ಫ್ಯಾಮಿಲೀ ಪ್ಲಾನಿಂಗ್
    ಮಾಡಿಸಿ ಆತನೋ..? Success ಆತಾ? ಆಗ್ತಾ?

    ಬೇರೆ ಬೇರೆಯಾಗಿ ಓದಿದಾಗ ತಟ್ಟುತ್ತದೆ
    ಒಂದೇ ಫ್ರೇಮ್ ನಲ್ಲಿ ಸಿಗ್ತಾ ಇಲ್ಲಾ...

    ಚೆನ್ನಾಗಿದೆ, ಮುಂದುವರೆಯಲಿ..

    ReplyDelete