ಒಂದಷ್ಟು ಒದ್ದೆ ನೆನಪುಗಳು ; ಒಣಗಿಸಲೆಂದು
ಅಕ್ಷರಗಳ ಕ್ಲಿಪ್ ಹಾಕಿ ಜೋತಾಡಿಸಿದ್ದೆ
ನೋಡಿದವರು ಕವಿತೆಗಳೆ೦ದರು..!
ಗರ್ಭಪಾತವಾಗಿದೆ ,
ನನ್ನ ಮನಸಿಗೆ , ಅವಳ ಕನಸಿಗೆ
ನೋಡುತ್ತೀರಿ , ಹುಟ್ಟುತ್ತವೆ
ಸಾವಿರ-ಸಾವಿರ ಅನಾಥ ಕವಿತೆಗಳು..!!
ಈ ನೆನಪುಗಳು
ಅದೆಲ್ಲಿಗೋ ಸಾಲು-ಸಾಲು
ಮೆರವಣಿಗೆ ಹೊರಟಿದ್ದವು
ಕವಿತೆಗೆಂದಾಯಿತೆಂದು ತಂದಿಟ್ಟಿದ್ದೇನೆ..!
ಕೊಳೆತ ಸಂಬಂಧಗಳ ಸುತ್ತಲಿನ
ಕವಿತೆಗಳ ಮೈ ತುಂಬಾ , ಅನುಮಾನದ ವಾಸನೆ!
ಕವಿತೆಗಳ ಚಿತೆಯಲ್ಲಿ
ನೆನಪುಗಳ
ಸಾಮೂಹಿಕ ಆತ್ಮಹತ್ಯೆ..!
ತಥ್.! ಹೇಳುವರು ಕೇಳುವರು ಯಾರು ಇಲ್ಲ
ಹೊತ್ತಲ್ಲದ ಹೊತ್ತಿನಲ್ಲಿ
ಈ ಕವಿತೆಗಳು ನೆನಪುಗಳೊಟ್ಟಿಗೆ
ಚಕ್ಕಂದವಾಡುತ್ತವೆ.!
ಮಾರಾಯರೆ , ಈ ಕವಿತೆಗಳಿಗೆಂದರೆ
ವಾರಸುದಾರರಿಲ್ಲದ ನೆನಪುಗಳು
ಅಕ್ಷರಗಳ ಕ್ಲಿಪ್ ಹಾಕಿ ಜೋತಾಡಿಸಿದ್ದೆ
ನೋಡಿದವರು ಕವಿತೆಗಳೆ೦ದರು..!
ಗರ್ಭಪಾತವಾಗಿದೆ ,
ನನ್ನ ಮನಸಿಗೆ , ಅವಳ ಕನಸಿಗೆ
ನೋಡುತ್ತೀರಿ , ಹುಟ್ಟುತ್ತವೆ
ಸಾವಿರ-ಸಾವಿರ ಅನಾಥ ಕವಿತೆಗಳು..!!
ಈ ನೆನಪುಗಳು
ಅದೆಲ್ಲಿಗೋ ಸಾಲು-ಸಾಲು
ಮೆರವಣಿಗೆ ಹೊರಟಿದ್ದವು
ಕವಿತೆಗೆಂದಾಯಿತೆಂದು ತಂದಿಟ್ಟಿದ್ದೇನೆ..!
ಕೊಳೆತ ಸಂಬಂಧಗಳ ಸುತ್ತಲಿನ
ಕವಿತೆಗಳ ಮೈ ತುಂಬಾ , ಅನುಮಾನದ ವಾಸನೆ!
ಕವಿತೆಗಳ ಚಿತೆಯಲ್ಲಿ
ನೆನಪುಗಳ
ಸಾಮೂಹಿಕ ಆತ್ಮಹತ್ಯೆ..!
ತಥ್.! ಹೇಳುವರು ಕೇಳುವರು ಯಾರು ಇಲ್ಲ
ಹೊತ್ತಲ್ಲದ ಹೊತ್ತಿನಲ್ಲಿ
ಈ ಕವಿತೆಗಳು ನೆನಪುಗಳೊಟ್ಟಿಗೆ
ಚಕ್ಕಂದವಾಡುತ್ತವೆ.!
ಮಾರಾಯರೆ , ಈ ಕವಿತೆಗಳಿಗೆಂದರೆ
ವಾರಸುದಾರರಿಲ್ಲದ ನೆನಪುಗಳು
Sooper sachetan awre:):)
ReplyDeleteಕವಿತೆ ಚೆನ್ನಾಗಿ ಇದೆ ಭಟ್ರೇ :)
ReplyDeletenimma kavanagalali adeno thrill sigutte!! kavana
ReplyDeletebareyada nammanthavaroo kavana bareyalu spoorthiyanu tamma kavitegalinda
kandukolluttare!! aha what a beautiful feelings with your ultimate words!! u r great batre!!!!
simply superb :)
ReplyDeleteಗರ್ಭಪಾತವಾಗಿದೆ ,
ReplyDeleteನನ್ನ ಮನಸಿಗೆ , ಅವಳ ಕನಸಿಗೆ
ನೋಡುತ್ತೀರಿ , ಹುಟ್ಟುತ್ತವೆ
ಸಾವಿರ-ಸಾವಿರ ಅನಾಥ ಕವಿತೆಗಳು..!!
very nice sir