Friday, August 31, 2012

ಪಿಸ್ತೂಲು ಮಾರುವ ಹುಡುಗಿ


ಕೆಂಪು ಸಿಗ್ನಲ್ ಬಳಿ
ಗುಳ್ಳೆ ಹಾರುವ ಪಿಸ್ತೂಲು ಮಾರುವ ಹುಡುಗಿ
ಕಾಯಬೇಕಿದೆ ಬದುಕು ಹಸಿರಾಗಲು..

ಕರಗಿದ್ದಷ್ಟೇ ಅಲ್ಲ , ಸೋಪು ನೀರಲ್ಲಿ
ಗುಳ್ಳೆಯಾಗುವ ಬದುಕು
ಬಣ್ಣ ಬಣ್ಣದ ಗುಳ್ಳೆ
ಚಿಕ್ಕ ಗುಳ್ಳೆ ಮರಿ ಕನಸು
ಅಪ್ಪ ಗುಳ್ಳೆ ಅಮ್ಮ ಗುಳ್ಳೆ
ಬದುಕ ಗುಳ್ಳೆ ನಿನ್ನೆ ಗುಳ್ಳೆ ನಾಳೆ ಗುಳ್ಳೆ
ಮೇಲಕ್ಕೇರಿ ಸಾಯುವ ಗುಳ್ಳೆ

ಅದೋ ನೋಡಿ ಮೇಲೆ ಹಾರಿ
ಟಪ್ ಒಡೆದ ದೊಡ್ಡ ಗುಳ್ಳೆ
ಗೊತ್ತೇ ಇಲ್ಲ ಇದ್ದರು ಇರಬಹುದು
ಪಿಸ್ತೂಲು ಮಾರುವ ಹುಡುಗಿಯ ಕನಸು..

ಥೋ ಯಾರಿಗೆ ಬೇಕು ಪಿಸ್ತೂಲು
ಐದು ರುಪಾಯಿ , ಸಂಜೆಗಾಯಿತು

ಒಡೆದ ಗುಳ್ಳೆ ಒಡೆದ ಹುಡುಗಿ
ಖಾಲಿಯಾಗದ ಪಿಸ್ತೂಲು ಖಾಲಿಯಾದ ಬದುಕು

2 comments:

  1. ಪಿಸ್ತೂಲು ಮಾರುವ ಹುಡುಗಿಯ ಬದುಕಲ್ಲೂ ಬಣ್ಣದ ಕನಸುಗಳಿರಬಹುದಲ್ಲವಾ..?
    ಕನಸುಗಳು ಖಾಲಿಯಾಗದಿರಲಿ...

    ReplyDelete
  2. ಹಮ್ .. ಕನಸು ಖಾಲಿಯಾಗದೆ ನನಸಾಗಲಿ

    ReplyDelete