Monday, February 6, 2012

ಕನ್ಯೆ ಕಾಡಿದ ಕ್ಷಣಗಳು .! - ೧


ಆಯತ , ಚೌಕ , ತ್ರಿಭುಜ , ವೃತ್ತ
ತಥ್ ! ಅರ್ಥವಾಗಲೇ ಇಲ್ಲ ಹತ್ತನೆಯ ಕ್ಲಾಸಿನ
ಪ್ರಮೇಯ ಹಾಗೂ ಹುಡುಗಿ.!

*******
ಪ್ಲಾಸಿ ಕದನ ಯಾವತ್ತಿಗೂ
ಮಧ್ಯಾನ್ಹದ ಪೀರಿಯಡ್ನಲ್ಲೇ,
ರಾಬರ್ಟ್ ಕ್ಲೈವ್ ಗೆದ್ಡೇ ಬಿಟ್ಟಿದ್ದ ,
ಯಾರೂ ,
ಅರ್ಥ ಮಾಡಿಸಲೇ ಇಲ್ಲ ,  ನೀನು
ಸೋತಿದ್ದು ಯಾಕೆಂದು..!

****
ಎಕಾನಮೀ ಕ್ಲಾಸ್ನಲ್ಲಿ ಕಲಿತ ಲೆಕ್ಕಾಚಾರ
ಬಯಕೆ ಆಸೆ ಎಲ್ಲ ಬೇರೆಯಂತೆ
ತಪ್ಪು ಯಾರದ್ದೂ ಗೊತ್ತಿಲ್ಲ ಕಣೇ ,
ಕ್ಲಾಸ್ ಮುಗಿದು , ನೀನು ಹೊರಟಾಗಲೇ
ಕೂಡಿಟ್ಟ ಪೈಸೆ
ಗುಲಾಬಿಗೆ ಸಾಕಾಗಿತ್ತು

*******
ಬರುವಷ್ಟೇ ಭಾಷೆ ಸಾಕಾಗಿತ್ತು ,
ಕನ್ನಡ ಕ್ಲಾಸೀನ ಲಘು , ಗುರು
 ಸಂದಿ ಸಮಾಸ  ಸಮಾನಾರ್ಥಕ ಪದ
ಥೊ ..!  ವಿರುದ್ದ ಪದದಲ್ಲಿ
 ನಿನ್ನ ಹೆಸರು

***********
ಕ್ಲಾಸ್ ಮುಗಿದಾಗ ಅರ್ಥವಾಗಿದ್ದು
ಯಾರೋ ಹೇಳಿದ್ದು
ನಿಜವಿರಬೇಕು  
ಜೀವಶಾಸ್ತ್ರಕ್ಕೆ ಬದಲು ಮನಶಾಸ್ತ್ರ
ಇರಬೇಕಿತ್ತು ..!


ವಿ. ಸೂ  : ಕಂಡ ಕೂಸುಗಳೆಲ್ಲಾ ಕಾಡಲೇ ಬೇಕು ಅಂತಿಲ್ಲ , ಕಾಡಿದ ಕನ್ಯೆಯರ ಮೇಲೆ ಲವ್ ಆಗಲೇ ಬೇಕು ಅಂತಿಲ್ಲ.   ಯಾವತ್ತೂ ಮಾತನಾಡಿಸದ  ಯಾವತ್ತಿಗೂ ನೆನಪಿನಲ್ಲಿ ಉಳಿಯುವ ಕೆಲವರ ಕುರಿತು ಒಂದಷ್ಟು ಲೈನ್ಸು ಈ ಫೆಬ್ರವರಿಯಿಂದ

17 comments:

  1. ಬರುವಷ್ಟೇ ಭಾಷೆ ಸಾಕಾಗಿತ್ತು ,
    ಕನ್ನಡ ಕ್ಲಾಸೀನ ಲಘು , ಗುರು
    ಸಂದಿ ಸಮಾಸ ಸಮಾನಾರ್ಥಕ ಪದ
    ಥೊ ..! ವಿರುದ್ದ ಪದದಲ್ಲಿ
    ನಿನ್ನ ಹೆಸರು

    ನಿನ್ನ ಶೈಲಿಯೇ ಅದ್ಭುತ ಮಾರಾಯ :) ಸೂಪರ್ ಸಚೇತನ್ As always !

    ReplyDelete
    Replies
    1. ಈಶ್ವರ ,
      ನಿಂಗ ಹಿಂಗೇ ಪ್ರೋತ್ಸಾಹ ಕೊಡ್ತಾ ಇದ್ರೆ ಇನ್ನೂ ಸ್ವಲ್ಪ ಬರೆಯುವ ಉಮೇದಿ

      Delete
  2. ಸಚೇತನ್... ಎಕಾನಮಿ ಕ್ಲಾಸು ಮತ್ತೆ ಕನ್ನಡ ಕ್ಲಾಸು ಇಷ್ಟ ಆತೋ... ಕಡಿಗೆ ವಿ. ಸೂ. ಕೂಡ ರಾಶಿಇಷ್ಟ ಆತು... :)
    ಕಂಡ ಕೂಸುಗಳೆಲ್ಲಾ ಕಾಡಲೇ ಬೇಕು ಅಂತಿಲ್ಲ , ಕಾಡಿದ ಕನ್ಯೆಯರ ಮೇಲೆ ಲವ್ ಆಗಲೇ ಬೇಕು ಅಂತಿಲ್ಲ... superb & true lines....

    ReplyDelete
    Replies
    1. ನಿನ್ನೆ ರಾತ್ರಿ ಮನೆಯಿಂದ ಬರ್ತಾ ಇದ್ದಿದ್ದಿ ಆವಾಗ ಹೈಸ್ಕೂಲ್ ಕಂಡ್ತು , ಇದೆಲ್ಲ ನೆನಪ್ ಆತು

      Delete
    2. ನಂಗು ಹೈ ಸ್ಕೂಲ್ ನ ಕಣ್ಣಲ್ಲೇ ಮಾತಾಡ್ತಿದ್ದ ಜೋಡಿ... ನಂಗ ಅವರನ್ನ ಬೆರಗುಗಣ್ಣಲ್ಲಿ ನೋಡ್ತಿದ್ದ ಪರಿ... ಎಲ್ಲಾ ನೆನಪಾತು ಒಂದ್ ಸಲಿ... :P ;)

      Delete
    3. ಥೊ ಅವಾಗ ಅದೆಲ್ಲ ಗೊತ್ತೇ ಇತ್ತಿಲ್ಲೆ

      Delete
  3. ವಿ. ಸೂ : ಕಂಡ ಕೂಸುಗಳೆಲ್ಲಾ ಕಾಡಲೇ ಬೇಕು ಅಂತಿಲ್ಲ , ಕಾಡಿದ ಕನ್ಯೆಯರ ಮೇಲೆ ಲವ್ ಆಗಲೇ ಬೇಕು ಅಂತಿಲ್ಲ. ಯಾವತ್ತೂ ಮಾತನಾಡಿಸದ ಯಾವತ್ತಿಗೂ ನೆನಪಿನಲ್ಲಿ ಉಳಿಯುವ ಕೆಲವರ ಕುರಿತು ಒಂದಷ್ಟು ಲೈನ್ಸು ಈ ಫೆಬ್ರವರಿಯಿಂದ sooper :)

    ReplyDelete
    Replies
    1. ಆದ್ರೆ ನನ್ನ ಈ ಪಾಲಿಸೀ ಪ್ರಯೋಜನ ಇಲ್ಲೇ ಅಂತ ನನ್ನ ಫ್ರೆಂಡ್ ಹೆಳಾತು ;)

      Delete
  4. ಶಾಲೆಯ ಪಾಠ ಏನೆಂದರೇನೂ ಅರ್ಥವಾಗದಿದ್ದರೂ ಪ್ರಕೃತಿಯ ಪಾಠ ಬಲುಬೇಗ ಅರ್ಥವಾಗುತ್ತಲ್ಲ - ಯಾವ ಗುರುವೂ ಬೇಕಿಲ್ಲದೆ...
    ಎಷ್ಟೋ ಕ್ಲಾಸುಗಳು ನೆನಪಿರುವುದೇ ಕೂಸುಗಳ ದೆಸೆಯಿಂದಲ್ಲವಾ..??
    ಕಂಡ ಕೂಸುಗಳೆಲ್ಲಾ ಕಾಡಬೇಕೆಂದಿಲ್ಲ...ಆದರೂ ಕೂಸುಗಳ ಕಾಣದೆ ಇರಲಾಗುವುದಿಲ್ಲ...
    ಮಾತಾಡದಿರುವ ಕೂಸುಗಳೇ ಹೆಚ್ಚಾಗಿ ಕಾಡುವ ಸೋಜಿಗವೂ ಇದೆಯಲ್ಲ...

    ಚಂದನೆಯ ಬರಹ...

    ReplyDelete
    Replies
    1. <>

      ಶ್ರೀವತ್ಸ , ನೀವು ಕಾಮೆಂಟ್ ಹಾಕಿದ್ದು ಒಳ್ಳೆಯ ಲೈನ್ಸ್

      Delete
  5. ಸಚೇತನ್.....ಎಲ್ಲಾ ಸಾಲುಗಳೂ ಸೂಪರ್ .....ಇಷ್ಟ ಆಯಿತು....:-)

    ReplyDelete
  6. ನವೀರು ಧ್ವನಿ ನಿಮ್ಮ ಕಾವ್ಯದ ಆಲೋಚನೆಯಲ್ಲಿ ಕಂಡಿದ್ದೇನೆ. ಇಲ್ಲಿರುವ ವಸ್ತುವಿಷಯಕ್ಕೆ ನನ್ನ ಮಾತು ಹೇಳಲಾರೆ.ಆದರೆ, ವಿಷಯದ ತರ್ಕಕ್ಕೆ ಬಂದಾಗ ಕಾವ್ಯ ಮೈದುಂಬಿದಂತೆ ಅನ್ನಿಸಿತು. ನವೀರು ಭಾವಗಳನ್ನು,ಅಲ್ಲಿರುವ ಅಲೆಗಳನ್ನು ಸೂಕ್ಷ್ಮವಾಗಿ ತೆಕ್ಕೆಗೆ ಸಿಕ್ಕಿಸುವ ಜಾಣ್ಮೆಗೆ ನನ್ನ ಸಲಾಂ..! ದೇವರು ಒಳ್ಳೆಯದು ಮಾಡಲಿ ಮಾನ್ಯರೆ.

    ReplyDelete
  7. ಸೂಪರ್ SBT....!
    ನಿನ್ನ ಆಲೋಚನೆಗಳನು ಆಲಿಂಗಿಸುವ ಬೃಹದಾಸೆ ! ಆದರೆ ಏನಕ್ಕೋ ಗೊತ್ತಿಲ್ಲ ....ಎಷ್ಟು ಕಷ್ಟ ಪಟ್ಟರೂ ನಾನು ನೀನಾಗಲಾಗುತ್ತಿಲ್ಲ....! ಅದಕಾಗಿ ನಾವು ಆಲಿಂಗಿಸಬಹುದಾದ ಆಲೋಚನೆಗಳನು ಸ್ವಲ್ಪ ತಿಳಿಸಿ ಗುರುವರ್ಯ ...!

    ReplyDelete