ಕತೆ ಬರೆಯಬೇಕಿತ್ತು ,  ಪಾತ್ರವೊಂದು ಕಳೆದಿದೆ 
ಸಿಕ್ಕರೆ ತಂದು ಕೊಡಿ , ಪ್ಲೀಸ್ , 
ಅಂತಿಂಥ ಪಾತ್ರವಲ್ಲವದು .
 ಎದೆಯಲ್ಲೊಂದು ಗಾಯವಿದೆ , ದಟ್ಟ ನೀಲಿಯಿದೆ 
ಮನಸಿಟ್ಟು ನೋಡಿ , ಕಂಡರು ಕಾಣಿಸಿತು..
 ******* 
ಲೋಳೆ ಮನಸಿನ ತುಂಬಾ , 
ಬೇಡವೆಂದರೂ  ಕವಿತೆಗಳೇ ಹುಟ್ಟುತ್ತವೆ
 ಕತೆಯಾಗದ ಪಾತ್ರಗಳು , 
ಕನ್ನೆಯಾಗಿಯೇ ಉಳಿದಿವೆ..! 
ರಾತ್ರಿಯೆ ಬೇಕಿಲ್ಲ ಬೆತ್ತಲಾಗಲು, 
ಕತೆಯಾಗಿಸಲು ಮನಸಿದ್ದರೆ ಸಾಕು..!
 ******  
ಹುಡುಕಿದರು ಸಿಗಲಾರದು ಆ ಪಾತ್ರದಂತಹ ಪಾತ್ರ 
ಎಲ್ಲಾ ಪಾತ್ರಗಳು ಹೀಗಲ್ಲ 
ಯಾರೋ ಹೇಳಿದಂತೆ , 
ಇನ್ಯಾರಿಗೋ ಕುಣಿಯುವ  ಪಾತ್ರಗಳು ;
 ಕ್ರಿಯೆಗೆ ಮೊದಲೇ ಸ್ಖಲಿಸುವ ಮನಸುಗಳು, 
ಕೃತಕ ಬೆಳಕಿನಲಿ ನೈಜವಾಗುವ ಪಾತ್ರಗಳು.. 
****** 
ಹಗಲು ಆಗಲೇ ಬಾರದೇನೋ , 
ಪಾತ್ರಗಳು ಮುಖವಾಡಗಳಾಗುತ್ತವೆ ,
 ಮುಖವಾಡಗಳು , ಮಾತಾಗುತ್ತವೆ , 
ನಗೆಯಾಗುತ್ತವೆ , ಅಳುವಾಗುತ್ತವೆ , 
ನಟಿಸುವ ಭಾವಗಳಾಗುತ್ತವೆ..! 
ಕತೆ ಮರೆತುಹೋಗುತ್ತದೆ
 ಪಾತ್ರವೊಂದು ಪರದೇಸಿಯಾಗುತ್ತದೆ..!
 ****  
ಕತೆಯಾಗದ ಪಾತ್ರದ  
ಕತೆಯೊಂದ ಬರೆಯಬೇಕಿದೆ , 
ಸಿಕ್ಕರೆ ಹೇಳಿ , 
 
nice ...
ReplyDeleteವಿರೋದಾಭಾಸ ಇದೆ :) ಚೆನ್ನಾಗಿದೆ .
ReplyDeleteಬರೀತಾ ಇರಿ .
liked it.. u ri8 will... keep up...
ReplyDeletethank you :)
ReplyDeleteIshwara Bhatre , ಹ್ಮ್..! ಆಭಾಸಕ್ಕಿಂತ ವಿರೋದಾಭಾಸವೇ ಮೇಲು ಎಂದು ಹಾಗೆ ಮಾಡಿದೆ..!
nanna edeya shileya mele!!!
ReplyDeletebarede naanu prema ole!!!but.......neeeenu
eeeee bitti blog mele
toriside ninna sachetan leele!!! wah wah !! soooparu!!!!