Monday, February 21, 2011

'ಸಾಫ್ಟ್' ಸಂಕಟಗಳು

ಇಂರ್ಟನೆಟ್ ಇದೆ , ಯಾರು ಅಲ್ಲ ದೂರ ,
ಆದರೆ ಯಾಕೋ ಗೊತ್ತಿಲ್ಲ ಯಾರೂ ಬರುತ್ತಿಲ್ಲ ಹತ್ತಿರ..!

*************************

 ಕೊಳೆತು ನಾರುತ್ತಿವೆ , ಸತ್ತು ಮಲಗಿದ ಸಂಬಂದಗಳು ,
ಸ್ವಚ್ಛಗೊಳಿಸಬೇಕಿದೆ ಹೃದಯವನ್ನು !

*************************

ಯಾರೋ ಹೇಳಿದ್ದರು ,
ಕುಟ್ಟುತ್ತಿರುವದು ಕೀ ಬೋರ್ಡನ ಕೀಗಳನ್ನಲ್ಲ
ಅಂಗಾತನೆ ಬಿದ್ದ ಭಾವನೆಗಳನ್ನ ..!

*************************

ಎಲ್ಲವೂ 'ಸಾಫ್ಟ' ಸಂಬಂದಗಳು ;
ಮನಸ್ಸಿನಲ್ಲಿರುವ ಯಾರೂ  ಇಳಿಯುತ್ತಿಲ್ಲ ,ಹೃದಯಕ್ಕೆ!

*************************
ಮನ ತುಂಬಾ ಸೂತಕ ,
ಕಣ್ಣು ಮುಚ್ಚದ ರಾತ್ರೆಗಳಲ್ಲಿ, ನೆನಪುಗಳ ಕೊಲೆ !

*********************
ಕ್ಷಮಿಸು ಹುಡುಗಿ ,
ಮಾನೀಟರ್ ನ ಪಿಕ್ಸೆಲ್ ಗಳಲ್ಲಿ ಮೂಡಿಸಿದ್ದ ನಿನ್ನ ಚಿತ್ರ
ಮೂಡಿಸಲಾಗುತ್ತಿಲ್ಲ ನಕ್ಷತ್ರಗಳ ಆಡಿಯಲ್ಲಿ..!

8 comments:

  1. hmmm... ಚೆನ್ನಾಗಿದೆ :) ಇನ್ನು ಸ್ವಲ್ಪ ಸೇರಿಸಿ :)

    ReplyDelete
  2. ಯಾರೋ ಹೇಳಿದ್ದರು ,
    ಕುಟ್ಟುತ್ತಿರುವದು ಕೀ ಬೋರ್ಡನ ಕೀಗಳನ್ನಲ್ಲ
    ಅಂಗಾತನೆ ಬಿದ್ದ ಭಾವನೆಗಳನ್ನ ..!
    idu thumbane ista aathu..

    ReplyDelete
  3. Thumba artha purna vagide kavana :)

    ReplyDelete
  4. ನಿನ್ನ ಮನಸು ತುಂಬಾ ಸಾಪ್ಟ್..
    ಸುತ್ತಲಿರುವುದೆಲ್ಲಾ ಅಸ್ಟೇ ಹಾರ್ಡ್..
    ನಿನ್ನ ಹೇಗೆ ಸೆಳೆಯಿತು ಈ ವರ್ಡ್..!!

    ReplyDelete
  5. Hah hah ha...olle saalugalu haage ivattina dinagalalli kadu satya.

    ReplyDelete