ಯುಡಿ ರೆಸಿಡೆನ್ಸಿ ಯ ಅಚ್ಚ ಬಿಳಿ ಬೆಡ್ ಷಿಟ್ ಗಳು
ಮೆತ್ತನೆಯ ಹೊದಿಕೆಯ ಮೇಲೆ
ಕಳೆದು ಹೋದ ಕಲೆಗಳು..!
ಕಂಡರು ಕಾಣಿಸದ ಕಲೆಗಳ ಹಿಂದೆ
ಮರೆಯಾದ ಕನಸುಗಳೆಷ್ಟೋ? ಲೆಕ್ಕವಿಲ್ಲ;
ಹೊರಳಾಡಿದ ದೇಹಗಳ
ತೂಕಕ್ಕೆ ಇಡಬೇಕು , ಅರ್ಥವಿರದ ಕ್ರಿಯೆಯು ಅರ್ಥಗಳ ಸೃಷ್ಟಿಸುತ್ತ ,
ಸುಕ್ಕುಗಟ್ಟಿಸುತ್ತವೆ ಬೆಡ್ ಷಿಟ್ ನ ಪದರಗಳ
ಬಸಿದ ಬೆವರುಗಳ
ಈ ಬೆಡ್ ಷಿಟ್ ಗಳು
ಮಲಗಿಸುತ್ತಲೇ ಇವೆ , ಒಂದಾದ ಮೇಲೊಂದು ದೇಹಗಳ
ದೇಹಗಳ ಮೇಲೊಂದು ದೇಹಗಳ , ಮಗ್ಗುಲು ಮಗ್ಗುಲಿನ ಮನಸುಗಳ
ಪ್ರತಿ ವಿಸರ್ಜನೆಗೂ ಹೊರಗಾಗುತ್ತದೆ ಬೆಡ್ ಷಿಟ್ ,
ಯಾರದೋ ಸುಖಕ್ಕೆ ಸಾಕ್ಷಿಯಾಗುತ್ತದೆ ,
ತಣಿದವರು ಹೊರ ನಡೆದೊಡೆ ,ಮತ್ತೆ
ಸಿದ್ಧವಾಗುತ್ತದೆ , ಹೊಸ ದೇಹಕ್ಕೆ , ಹೊಸ ಹೊರಳಾಟಕ್ಕೆ ,
ಕಾಲನಡಿಯಲ್ಲಿ ಸುಕ್ಕುಗಳ ಮರೆಸಿ ,
ಬರಮಾಡಿಕೊಳ್ಳುತ್ತದೆ ಕಂಡು ಕಾಣದ ಹಳೆ ಕಲೆ ನಡುವೆ...!

ಅರ್ಥವಿರದ ಕ್ರಿಯೆಯ ಸುತ್ತಲೇ ಸೃಷ್ಟಿ ಸುತ್ತುತ್ತಿದೆಯಲ್ವಾ..?
ReplyDeleteಬಯಕೆಗಳ ಸುತ್ತಲೇ ಸಾವಿರ ಕನಸುಗಳು ಸುತ್ತುತ್ತವಲ್ವಾ..?
ದೇಹ ಸುಕ್ಕಾದರೂ ಆಸೆ ಸುಕ್ಕಾಗದಲ್ವಾ..?
ಚಂದನೆಯ ಬರಹ...
ಸೂಪರ್ ! ನೀವು ಬರೆದಿದ್ದು
ReplyDeleteಭಾವಗಳ ಗೊಂಚಲು : ಸೂಪರ್... ಭಟ್ರೇ ಚಂದ ಬರ್ದ್ರಿ...
ReplyDeleteಚೆನ್ನಾಗಿದೆ ಸಚೇತನಾ.
ReplyDeleteಕಲೆಗೂ ಕಾಮಕ್ಕೂ ಎಷ್ಟು ಹತ್ತಿರ ... ಮತ್ತೆ ಕಲೆ (Art & Mark.. Both)
tumba chennagide!!!
ReplyDelete