Saturday, August 20, 2011

ಬೆಡ್ ಷಿಟ್

ಯುಡಿ ರೆಸಿಡೆನ್ಸಿ ಯ ಅಚ್ಚ ಬಿಳಿ ಬೆಡ್ ಷಿಟ್ ಗಳು   
ಮೆತ್ತನೆಯ ಹೊದಿಕೆಯ ಮೇಲೆ  
ಕಳೆದು ಹೋದ ಕಲೆಗಳು..!  
ಕಂಡರು ಕಾಣಿಸದ ಕಲೆಗಳ ಹಿಂದೆ  
ಮರೆಯಾದ ಕನಸುಗಳೆಷ್ಟೋ?  ಲೆಕ್ಕವಿಲ್ಲ;  
ಹೊರಳಾಡಿದ ದೇಹಗಳ  
ತೂಕಕ್ಕೆ ಇಡಬೇಕು , ಅರ್ಥವಿರದ ಕ್ರಿಯೆಯು ಅರ್ಥಗಳ ಸೃಷ್ಟಿಸುತ್ತ ,
ಸುಕ್ಕುಗಟ್ಟಿಸುತ್ತವೆ  ಬೆಡ್ ಷಿಟ್ ನ ಪದರಗಳ 
ಬಸಿದ ಬೆವರುಗಳ   
ಈ  ಬೆಡ್ ಷಿಟ್ ಗಳು  
ಮಲಗಿಸುತ್ತಲೇ ಇವೆ , ಒಂದಾದ ಮೇಲೊಂದು ದೇಹಗಳ   
ದೇಹಗಳ ಮೇಲೊಂದು ದೇಹಗಳ , ಮಗ್ಗುಲು ಮಗ್ಗುಲಿನ ಮನಸುಗಳ  
ಪ್ರತಿ ವಿಸರ್ಜನೆಗೂ ಹೊರಗಾಗುತ್ತದೆ  ಬೆಡ್ ಷಿಟ್ ,  
ಯಾರದೋ ಸುಖಕ್ಕೆ ಸಾಕ್ಷಿಯಾಗುತ್ತದೆ ,  
ತಣಿದವರು ಹೊರ ನಡೆದೊಡೆ ,ಮತ್ತೆ  
ಸಿದ್ಧವಾಗುತ್ತದೆ , ಹೊಸ ದೇಹಕ್ಕೆ , ಹೊಸ ಹೊರಳಾಟಕ್ಕೆ ,  
ಕಾಲನಡಿಯಲ್ಲಿ ಸುಕ್ಕುಗಳ ಮರೆಸಿ ,
ಬರಮಾಡಿಕೊಳ್ಳುತ್ತದೆ ಕಂಡು ಕಾಣದ ಹಳೆ ಕಲೆ ನಡುವೆ...!

5 comments:

  1. ಅರ್ಥವಿರದ ಕ್ರಿಯೆಯ ಸುತ್ತಲೇ ಸೃಷ್ಟಿ ಸುತ್ತುತ್ತಿದೆಯಲ್ವಾ..?
    ಬಯಕೆಗಳ ಸುತ್ತಲೇ ಸಾವಿರ ಕನಸುಗಳು ಸುತ್ತುತ್ತವಲ್ವಾ..?
    ದೇಹ ಸುಕ್ಕಾದರೂ ಆಸೆ ಸುಕ್ಕಾಗದಲ್ವಾ..?
    ಚಂದನೆಯ ಬರಹ...

    ReplyDelete
  2. ಸೂಪರ್ ! ನೀವು ಬರೆದಿದ್ದು

    ReplyDelete
  3. ಭಾವಗಳ ಗೊಂಚಲು : ಸೂಪರ್... ಭಟ್ರೇ ಚಂದ ಬರ್ದ್ರಿ...

    ReplyDelete
  4. ಚೆನ್ನಾಗಿದೆ ಸಚೇತನಾ.

    ಕಲೆಗೂ ಕಾಮಕ್ಕೂ ಎಷ್ಟು ಹತ್ತಿರ ... ಮತ್ತೆ ಕಲೆ (Art & Mark.. Both)

    ReplyDelete